ಗಝಲ್


ಮತ್ತದೇ ಸಂಜೆಯಲಿ ನೆನಪಾಗಬೇಡ ಎಲ್ಲ ಮರೆತಿರುವಾಗ
ಕನಸಿನ ದಾರಿಯಲಿ ಎದುರಾಗಬೇಡ ಎಲ್ಲ ಮರೆತಿರುವಾಗ

ದಾರಿಯ ಹೂಗಳು ಅರಳಿ ನಿಂತಿವೆ ಎಂದಿನಂತೆ  ಮುಡಿಯೇರಲು
ಮುಳ್ಳುಗಳ ಭಯವೀಗ ಕೀಳಬೇಡ ಎಲ್ಲ ಮರೆತಿರುವಾಗ

ನಿನ್ನೆಗಳ ಕನ್ನಡಿಯೊಳಗೆ ನನ್ನ ನಾ ನೋಡಿಕೊಂಡೆ ಅನುದಿನ
ಎಲ್ಲೆ ಮೀರಿ ಕಲ್ಲುಗಳ ಬೀಸಬೇಡ ಎಲ್ಲ ಮರೆತಿರುವಾಗ

ಕರಿಇರುಳ ಸೆರಗಲ್ಲಿ ತಾರೆಗಳ ಕೂಡಿ ಚಂದ್ರ ನೆನಪಿಸುತಿಹ
ಸರಿಇರುಳ ಸರಸವನು ನೆನಪಿಸಬೇಡ ಎಲ್ಲ ಮರೆತಿರುವಾಗ

ಮೆಹಫಿಲ್ಲಿನ ಮಂದಿಗೆ ನಿಶೆಯೇರಿದ ಮೇಲೆ ಮನಸೇ ವಿಮಾನ
ನಿನ್ನ ಕಣ್ಣುಗಳನ್ನು ಹಾಯಿಸಬೇಡ ಎಲ್ಲ ಮರೆತಿರುವಾಗ

'ರನ್ನ ಕಂದ' ನ ಎದೆಯಲಿ ತಿಳಿ    ನೀರ ಕೊಳವಿರಲಿ ಸದಾಕಾಲ
ಮತ್ತೆ ನೆನಪುಗಳ ಸುರುವಿ ಕಲಕಬೇಡ ಎಲ್ಲ ಮರೆತಿರುವಾಗ


--- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....