ಬೆಟ್ಟ


ದಿವ್ಯ ಮೌನದಿ
ಧೇನಿಸುತ್ತಿತ್ತು ಬೆಟ್ಟ
ಅಂಬೋಧಗಳ
ಎದೆಗೆ ತಾಗಿಸಿಕೊಂಡು
ಸುಳಿಸುಳಿವ ತಿಳಿಗಾಳಿಯ
ಉಸಿರಾಡುತ್ತ
ಸುತ್ತಮುತ್ತಿನದಕೆಲ್ಲ
ಏಕಾಗ್ರಚಿತ್ತ

ಅಂತರಂಗದೊಳಗೆ
ಅವಿತ ಬೇಗೆಯೊಳಗೆ
ಜಗವ ಸುಡುವ ಜಂಘಾಬಲ
ಬಹಿರಂಗದೊಳಗೆಲ್ಲ
ವಿಶ್ರಾಂತ ಮನಸ್ಥಿತಿಯಂತಹ
ವಿಹಂಗಮ ಆಡುಂಬೋಲ

ಬೆಟ್ಟವೊಂದು ನಿಶ್ಚಿಂತೆಯ ಪ್ರತಿಮೆ
ಕೊರೆದರೂ ಸಹ
ಮೆರೆವ ಸಂಭಾವಿತ
ಅಂತಾಗಬೇಕು ಮನ

ಎರಗುವ ಉಲ್ಕೆಗಳ ಕರಗಿಸಿಬಿಡಬೇಕು
ನೋವು ನಲಿವುಗಳ
ಜೋಡಿಸಿಡಬೇಕು
ಒಮ್ಮೊಮ್ಮೆ ಸುರಂಗದಿ
ಹಾದಿ ತೋರಿಸಬೇಕು..

ಬೆಟ್ಟ ಮೌನ ಮುರಿಯಲ್ಲ..
ಚಿತ್ತ ಬಿಟ್ಟು ಮುಂದುವರೆಯಲ್ಲ..


---ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...