ಹೆಜ್ಜೆಗಳಳಿಯದೇ ಇರಲಿ


ಎದುರಿಗೆ ಎದುರಾಗಿವೆ
ದಾರಿಗಳು ಹಲವು|
ಗರಿಕೆ ಬೆಳೆಯದೇ ದಾರಿ ತೋರಿವೆ
ಹೆಜ್ಜೆಗಳು ಕೆಲವು|

ನಡೆಯಬೇಕಿದೆ ಹುಡುಕಬೇಕಿದೆ
ನಾವು ಕೈತಂದ ಕಾರ್ಯಗಳ|
ಹುಟ್ಟಿ ಸಾಯುವ ಮಧ್ಯೆ ಕೆದಕಬೇಕಿದೆ
ನೋವು ನಲಿವಿಂದ ಧೈರ್ಯಗಳ|

ಇರಲಿ ನಿಸರ್ಗ ಸಗ್ಗಕೆ ನಮ್ಮ ನಿಮ್ಮೆಲ್ಲರ ವಂದನೆ|
ಬರಲಿ ಸುಗ್ಗಿಯಾಗಿ ಸ್ನೇಹವಿಂದು
ಪ್ರೇಮವಾಗಲಿ ಈಗ ಸ್ಪಂದನೆ|

ದಾರಿಗಳ ನಡುವೆ ಸಿಕ್ಕ ಹೆಜ್ಜೆಗಳಳಿಯದೇ ಇರಲಿ|
ಮನಸುಗಳ ಒಳಗೆ ನಕ್ಕ
ನಗೆಗಳು ನಳನಳಿಸುತಿರಲಿ|

--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...