ಧರ್ಮೋ ರಕ್ಷತೀ...
ಧರ್ಮ ಎಂದಾಗ
ನಗು ಈಗೀಗ
ಧರ್ಮೋ ರಕ್ಷತಿ ರಕ್ಷಿತಃ
ಎಲ್ಲಿ ಯಾರನು ರಕ್ಷಿಸುತಿದೆ ಧರ್ಮ?
ಯಾರು ಮಾಡಿದ ಕರ್ಮ..?
ಕೆಟ್ಟತನದ ಜತೆ ಆತ್ಮದ ಹೋರಾಟಕ್ಕೆ
ಜಿಹಾದ್ ಎಂದರು ಪೈಗಂಬರ್
ಸಲ್ಲದ ಅರ್ಥಗಳ ಹಡೆದು
ಧರ್ಮವನೆ ಒಡೆದು
ಸಾವುಗಳು ಅಪ್ಪುತಿವೆ
ಕೊಳಕುಗಳ ಎರೆದು ಮಜ್ಜನ ಗೈವವರ ನಡುವೆ
ಸಜ್ಜನರು ಹೇಗೆ ಬದುಕಿಯಾರು?
ಎಂಜಲುಗಳ ಮೇಲೆ ಉರುಳಾಡಿ
ಧರ್ಮೋ ರಕ್ಷತಿ ಎನ್ನುವವರು
ಸಿಡಿಬಾಂಬುಗಳ ಸಿಡಿಸಿ
ಕಾಫಿರರನ್ನು ಅಳಿಸಿ ಧರ್ಮ ಕಟ್ಟಲಾರಿರಿ
ಎದೆಯ ಗೂಡಲಿ ಬೀಡು ಬಿಟ್ಟ
ಮಾನವತೆಯೇ ಧರ್ಮ ;
ಅದ ಮುಟ್ಟಲಾರಿರಿ ಸಹ
ನಿಮ್ಮ ತುಪಾಕಿಗಳು, ಮಷಿನು ಗನ್ನುಗಳಿಗೆ ಯಾವ ಧರ್ಮವಿದೆ?
ಎದೆಯ ಬಗೆದು ರಕ್ತ ಕುಡಿವ ಧರ್ಮವಿದೆಯೇ?
ನೀವು ಅವರ ದೇಹಗಳ ಕೊಲ್ಲಬಲ್ಲಿರಿ
ದೇಶ ಪ್ರೇಮವ ಕೊಲ್ಲಲಾರಿರಿ..
ನಿಮ್ಮ ಮೊಂಡು ವಾದಗಳಿಗೆ
ಚೂಪಾದ ಕತ್ತಿಯೊಂದು ಕಾಯುತ್ತಲಿದೆ..
ನಿಮ್ಮ ಅನಿಷ್ಟ ಧರ್ಮದ ಅಂತ್ಯಕ್ಕಾಗಿ...
--- ರನ್ನ ಕಂದ(ಸಚಿನ್ ಕುಮಾರ ಬ.ಹಿರೇಮಠ)
ನಗು ಈಗೀಗ
ಧರ್ಮೋ ರಕ್ಷತಿ ರಕ್ಷಿತಃ
ಎಲ್ಲಿ ಯಾರನು ರಕ್ಷಿಸುತಿದೆ ಧರ್ಮ?
ಯಾರು ಮಾಡಿದ ಕರ್ಮ..?
ಕೆಟ್ಟತನದ ಜತೆ ಆತ್ಮದ ಹೋರಾಟಕ್ಕೆ
ಜಿಹಾದ್ ಎಂದರು ಪೈಗಂಬರ್
ಸಲ್ಲದ ಅರ್ಥಗಳ ಹಡೆದು
ಧರ್ಮವನೆ ಒಡೆದು
ಸಾವುಗಳು ಅಪ್ಪುತಿವೆ
ಕೊಳಕುಗಳ ಎರೆದು ಮಜ್ಜನ ಗೈವವರ ನಡುವೆ
ಸಜ್ಜನರು ಹೇಗೆ ಬದುಕಿಯಾರು?
ಎಂಜಲುಗಳ ಮೇಲೆ ಉರುಳಾಡಿ
ಧರ್ಮೋ ರಕ್ಷತಿ ಎನ್ನುವವರು
ಸಿಡಿಬಾಂಬುಗಳ ಸಿಡಿಸಿ
ಕಾಫಿರರನ್ನು ಅಳಿಸಿ ಧರ್ಮ ಕಟ್ಟಲಾರಿರಿ
ಎದೆಯ ಗೂಡಲಿ ಬೀಡು ಬಿಟ್ಟ
ಮಾನವತೆಯೇ ಧರ್ಮ ;
ಅದ ಮುಟ್ಟಲಾರಿರಿ ಸಹ
ನಿಮ್ಮ ತುಪಾಕಿಗಳು, ಮಷಿನು ಗನ್ನುಗಳಿಗೆ ಯಾವ ಧರ್ಮವಿದೆ?
ಎದೆಯ ಬಗೆದು ರಕ್ತ ಕುಡಿವ ಧರ್ಮವಿದೆಯೇ?
ನೀವು ಅವರ ದೇಹಗಳ ಕೊಲ್ಲಬಲ್ಲಿರಿ
ದೇಶ ಪ್ರೇಮವ ಕೊಲ್ಲಲಾರಿರಿ..
ನಿಮ್ಮ ಮೊಂಡು ವಾದಗಳಿಗೆ
ಚೂಪಾದ ಕತ್ತಿಯೊಂದು ಕಾಯುತ್ತಲಿದೆ..
ನಿಮ್ಮ ಅನಿಷ್ಟ ಧರ್ಮದ ಅಂತ್ಯಕ್ಕಾಗಿ...
--- ರನ್ನ ಕಂದ(ಸಚಿನ್ ಕುಮಾರ ಬ.ಹಿರೇಮಠ)
Comments