ಅಪ್ಪ...

ಅಪ್ಪ ನನಗಿಷ್ಟ
ಅವ ನನಗಾಗಿ
ಏನನ್ನೂ ಸಂಪಾದಿಸಲಿಲ್ಲ
ಕಷ್ಟಗಳ ಮಧ್ಯೆ
ನಗುವ ಕಲೆಯನ್ನು
ಸುಳ್ಳುಗಳ ನಡುವೆ
ಸತ್ಯವಂತನಾಗುವ
ಬಗೆಯನ್ನು
ಸದ್ಯಕ್ಕೆ
ಉಪಯೋಗಕ್ಕೆ ಬಾರದ
ಮೌಲ್ಯಗಳನ್ನು
ಸಂಪಾದಿಸಿ ಕೊಟ್ಟ,


ಕಲಿಸಲಿಲ್ಲ
ತಾ ಕಲಿತ
ಚಟಗಳನು
ಬದಲಿಸದೇ ಬಂದ
ಹಠಗಳನು
ತನಗಾಗಿ ಬದುಕುವುದ
ಕಲಿಸಲಿಲ್ಲ
ಅಪ್ಪನ ಮಾತುಗಳಲಿ
ಹರಿಶ್ಚಂದ್ರ ಕಂಡ,
ಬುದ್ಧ ,ಬಾಪು, ಸೋಮಾರಿ
ಭಿಕಾರಿ,ಜಾಣ,ಹುಚ್ಚ
ಹೀಗೆ ಎಲ್ಲರೂ
ಪುಂಖಾನುಪುಂಖವಾಗಿ
ಬಂದು ಹೋದರು
ಅಪ್ಪ ನನಗೆ ದಾರಿ ತೋರದೆಯೂ
ಮಾದರಿಯಾದ

--ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...