ಅನುರಕ್ತ...

ಹೇಗೆ ಹೊಗಳಲಿ ನಿನ್ನ ನಾನು
ಮನದ ಚೆಲುವ ಸಿರಿಯನು
ಹೀಗೆ ಸಾಗಲಿ ಬಾಳು ಇನ್ನು
ಬೇರೆ ಏನನು ಬಯಸೆನು

ಎದೆಯ ಒಳಗೆ ಒಲವ ಸುರಿದು
ಪ್ರೇಮದರಮನೆ ರಚಿಸಿದೆ
ಮಧುರ ಅಧರ ಅಧರ ಬೆಸೆದು
ಬಾಳ ತಿನಿಸನು ರುಚಿಸಿದೆ

ಹೊರಗೆ ಚೆಲುವು ಒಳಗೆ ಒಲವು
ಹೆಣ್ಣೇ ನೀನು ಪ್ರಕೃತಿ
ಮುನಿಸು ವಿರಹ ಸರಿಯೇ ಸನಿಹ
ಕಣ್ಣ ಕಣ್ಣಲೇ ಸ್ವೀಕೃತಿ

ತನ್ನ ತಾನೇ ಉರಿದು ಬೆಳಕ
ಬೀರುವಂತೆ ನಂದಾದೀಪ
ನನ್ನ ಉಸಿರು ಇರುವ ತನಕ
ಮರೆಯಲಾರೆ ನಿನ್ನ ರೂಪ

ಯಾವ ನೋವು ಯಾವ ನಲಿವು
ಏನೇ ಬಂದರೂ ಸಮ್ಮತ
ನನ್ನ ನಿನ್ನ ಪ್ರೀತಿಯೊಂದೇ
ಇರಲಿ ಎಂದೂ ಶಾಶ್ವತ

--- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....