ಬೆಳಕಿಂಡಿ

ಕತ್ತಲ ಕೋಣೆ
ಸಾಗಿದಂತೆ ಸಿಗುತಿಲ್ಲ
ಯಾವುದೇ ಗೋಡೆ,ಕಿಟಕಿ,ಬಾಗಿಲು
ಎದೆಯಲೇನೋ ದಿಗಿಲು

ದನ ತಿಂದು ಹಸಿವು ನೀಗಿಸಿದವರು
ಯಾರದೋ ಭಯಕ್ಕೆ ನಲುಗಿ
ಅಸ್ತಿತ್ವ ಕಳೆದುಕೊಂಡವರು
ಕಣ್ಣೀರಲೇ ನೆನೆದು ಒಡಲ ಹೊರೆದವರು
ಮುಗಿಲು ನೋಡುತ್ತ ಪಾತಾಳ ಕಂಡವರು

ಅನಿಷ್ಟಕ್ಕೆಲ್ಲ ಶನಿಯೇ ಕಾರಣನಲ್ಲ
ನಿಂಮ ತುಳಿದವರು ಇಂತವರೇ ಅಲ್ಲ
ಕಂತೆ ಪುರಾಣಗಳನು ನಂಬಿ
ನಂಬದಿರಿ
ಅಂತೆಯೇ ಎಂದೂ ಬಾಳದಿರಿ

ಬೆಳಕಿಗಾಗಿ ನಂಮ ಬದುಕು
ಮಾನವತೆಯಲ್ಲಿ ಅದನು ಹುಡುಕು
ತಿಂದು ತೊಡುವ ಗೊಡೆವೆ ಬೇಡ ನಮಗೆ
ಉಳಿಯುವುದು ಸತ್ಕರ್ಮಗಳು ಮಾತ್ರ ಕೊನೆಗೆ

ಕತ್ತಲು ಕೋಣೆಗೆ
ಹುಡುಕೋಣ ಎಲ್ಲರೂ ಸೇರಿ ಬೆಳಕಿಂಡಿ
ಸಾಗಲಿ ಸಾಂಗತ್ಯ ನಲಿವಿಂದ
ಬದುಕು ಜಟಕಾ ಬಂಡಿ

-- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....