ಭೂತಾಯಿಯ ಅಳಲು

ಜಲ ಕೊಟ್ಟೆ
ನೆಲ ಕೊಟ್ಟೆ
ಉಸಿರಾಡಲು
ಬಲ ಕೊಟ್ಟೆ
ಸಿರಿ ಕೊಟ್ಯೆ
ಸುಖ ಕೊಟ್ಟೆ
ಹೆಸರಾಗೋ ಛಲ ಕೊಟ್ಟೆ
ಬಲಿತು ನರ ನೀನು
ಮಗುವೆಂದೇ ಮುದವಿಟ್ಟೆ
ಅದಕೆ ನೀ ಪ್ರತಿಯಾಗಿ
ನನ್ನೆದೆಗೆ ನೋವಿಟ್ಟೆ
ಹಿಂದೆಂದೂ ಕಂಡಿರದ
ಕಷ್ಟಗಳ ತಂದಿಟ್ಟೆ
ಅರಿಯದಿರೇ ನೀನಿದನು
ಒಡೆವುದು ಸಹನೆ ಕಟ್ಟೆ
-- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...