ನಡುರಾತ್ರಿ

ನಿದ್ದೆ ಜೋರು
ಸತ್ತ ಹೆಣದಂತೆ ಮೈ

ಮೈಕೆಳಗೆ ಮೆತ್ತನೆಯ ಹಾಸು
ಮನದೊಳಗೆ ಕೊಳಕು ಕಾಠಿಣ್ಯದ ರೇಸು

ಸೋಂಪಾದ ಸುಖ ನಿದ್ರೆ
ಹಲವು ಸುಖವಿರುವ ಕನಸುಗಳ ಪರುವ

ಬಡವ ಬಲ್ಲಿದರ ಏಕಮಾನ
ನಡುರಾತ್ರಿಯ ತುಂಬ ಒಂದೇ ತೆರ

ಮೌನ ಹೊಕ್ಕ ಇರುಳು
ನೆಮ್ಮದಿ ತುಂಬಿದ ಕೊರಳು

ಬಾಳದಿನದಲ್ಲೀಗ ನಡುರಾತ್ರಿ
ಮುಂದೆ ಬೆಳಗು ಬೈಗು

ಇರಲೀ ಸದಾ ತಂಪೆರೆವ ನಡುರಾತ್ರಿ
ನೋವಿನೊಳಗಿಂದು ಅಡಗಿದೆ
ನಲಿವು ತುಂಬಿದ ಮೈತ್ರಿ
--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...