ವಾಸ್ತವ

ಸದ್ಯಕ್ಕೆ ಇಲ್ಲೇ ಇದ್ದೇನೆ
ಅಸಹನೀಯ ಸನ್ನಿವೇಶದಲಿ
ಆಗಾಗ ಉಸಿರಾಡುತ್ತ
ಚೀರಾಡುತ್ತ
ಸತ್ಯವನು ಕತ್ತಲೆಯಿಂದ
ತೊಳೆಯುತ್ತ
ಇಲ್ಲೇ ಇದ್ದೇನೆ
ಬುದ್ಧನ ನಗು ಕೇಳಿಸಿದರೂ
ನಗಲಾರದ ಸ್ಥಿತಿ ನಂದು
ಎಲ್ಲ ವೇದಾಂತ ಕಟ್ಟಿದ್ದೇನೆ
ಅವುಗಳ ಮೇಲೆ ನಿಂತಿದ್ದೇನೆ
ಇಲ್ಲೇ ಇದ್ದೇನೆ
ಸಾವಿನ ಹೆಗಲಿಗೆ ಏಣಿ
ಬರುವ ತನಕ
ಬದುಕಿಗಾಗಿ ಬಡಿದಾಡುತ್ತ
ಇಲ್ಲಿಯೇ ಇದ್ದೇನೆ
--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...