ಇಂದಿನ ರೈತ

ನೇಗಿಲು ಸಹ ಈಗೀಗ
ಶೂಲದಂತೆ ತೋರಿ
ಇರಿದಂತೆ ಹೆದರಿಸುತ್ತಿದೆ
ಕ್ಯಾಲೆಂಡರ್ ನ ದಿನಗಳು
ಸಾವಿಗೆ ನೇರ ಸೋಪಾನದ ಹಿಡಿಕೆ
ಬರದ ಮಳೆ ಎದೆಯ ಕನಸುಗಳನು
ಅಣಕಿಸುತಿದೆ
ಬ್ಯಾಂಕಿನ ಸಾಲದ ಅಂಕಿಗಳು
ಎದೆಯ ನಡುಗಿಸುತಿವೆ
ನೇಗಿಲ ಯೋಗಿಯ ಧರ್ಮ ಅನಾಥ
ಎಲ್ಲ ಜಂಜಾಟಗಳ ಉರುಳು
ಬಿಟ್ಟೀತೇ ಇವನ ಕೊರಳು
ಸಾವೇ ಸದ್ಯ ಅವನ ಬಂಧು
ಶರಣಾಗುತಿಹ ತನ್ನ ಸ್ವಾಭಿಮಾನವ
ಕೊಂದು.
-- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....