ಹೆಂಡತಿ ತವರಿಗೆ ಹೊರಡುವೆನೆಂದರೆ...
"ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿನ್ನಿಲ್ಲದ ಕೋಪ"
-- ಕೆ ಎಸ್ ನ
ನಿಜ ರೀ, ಹೆಂಡತಿ ತವರಿಗೆ ಹೋದರೆ ಬಾಳು ಬರೀ ಅಮವಾಸ್ಯೆ,ಅದೇ ಚಿತ್ರಾನ್ನ,ಕತ್ತಲು
ಮತ್ತು ಕೋಪ(ಕೇವಲ ಹೆಂಡತಿಯನ್ನು ಮಾತ್ರ ಸಿನ್ಸಿಯರ್ ಆಗಿ ಪ್ರೀತಿಸುವವರಿಗೆ).
ಆಫೀಸಿಂದ ಮನೆಗೆ ಬಂದ ತಕ್ಷಣ ಆಕೆ ಕೊಡೋ ಕಾಫಿ ದಿನದ ಎಲ್ಲ ಆಯಾಸವನ್ನ ಕಡಮೆ
ಮಾಡುತ್ತದೆ. ಅದೇ ನಾನೇ ಮಾಡಿಕೊಂಡ ಟೀ ಕಾಫೀ ಕಲಗಚ್ಚು ಇದ್ದಂಗಿರುತ್ತದೆ. ಬೆಳಿಗ್ಗೆ
ಸಿಹಿ ಮುತ್ತು ನೀಡಿ ಅಲಾರಾಂನಂತೆ ಎಬ್ಬಿಸಿ,ಸ್ನಾನಕ್ಕೆ ನೀರಿಟ್ಟು ನಂ ಬಟ್ಟೆಗಳನ್ನ
ಇಟ್ಟು ನಮ್ಗೆ ಟಿಫಿನ್ ರೆಡಿ ಮಾಡ್ತಾಳೆ. ನಗುನಗುತಾ ಬೀಳ್ಕೊಡ್ತಾಳೆ. ಮನೇನಾ ಅಂದವಾಗಿ
ಇಟ್ಕೊಳ್ಳೋದು ಹೆಂಡತಿಗೆ ಸುಲಭವಾಗಿ ಒಲಿದ ಕಲೆ.ಅದೇ ನಾನೊಬ್ನೆ ಇದ್ದಾಗ ಎಲ್ಲಿ ಏನ್
ಬಿದ್ದಿರುತ್ತೋ ಅದ್ ಅಲ್ಲೇ ಇರುತ್ವೆ.
ನೀಟಾಗಿ ಬಟ್ಟೆ ಒಗೆದು ಇಸ್ತ್ರಿ ಮಾಡೋ ಹೆಂಡ್ತಿ ಊರಿಗೆ ಹೋದಾಗ ನಾವ್ ಬಟ್ಟೆ ತೊಳೆಯೋ
ಪಾಡು ಹೇಳತೀರದು. ಸ್ವಚ್ಛವೇನೋ ಆಗ್ತವೆ ಆದ್ರೆ ಹೆಂಡ್ತಿ ಒಗೆದಂಗಾಗಲ್ಲ. ಅಡುಗೆ ಬರದ
ನನ್ನಂಥವರ ಪಾಡು ಬೇಡವೇ ಬೇಡ. ಉಪ್ಪೋ ಹುಳಿಯೋ ಖಾರಾನೋ ಹೆಚ್ಛಾಗಿ ನಾನೇ ತಿನ್ನದಷ್ಟು
ಕೆಟ್ಟದಾಗಿರುತ್ತೆ ಅಡುಗೆ. ಪ್ರತಿ ಕ್ಷಣವೂ ಹೆಂಡ್ತಿ ಬೇಕು ಹೆಂಡ್ತಿ ಎನಿಸುತ್ತೆ.
ತವರಿಗೆ ಹೋದಾಗ ಖುಷಿ ಪಡೋ ಗಂಡಸರೂ ಇದ್ದಾರೆ ಅದ್ಬಿಡಿ. ಆದರೆ ನಮಗಾಗೇ ಬದುಕೋ ಮುದ್ದು
ಜೀವ ಅದು. ಅದಕ್ಕೆ ಪದೇ ಪದೇ ಹೆಂಡ್ತೀನ ತವರಿಗೆ ಕಳಿಸಿ ನಲುಗದಿರಿ

Comments