ಹಿಂದೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಸತ್ಯಗಳು :

ಹಿಂದೂ ಸಂಪ್ರದಾಯಗಳ ಹಿಂದಿನ
ವೈಜ್ಞಾನಿಕ ಸತ್ಯಗಳು :
ಭಾರತೀಯ ಸಂಸ್ಕೃತಿ ಜಗತ್ತಿನ ಎಲ್ಲ
ಸಂಸ್ಕೃತಿಗಳಿಗಿಂತಲೂ ಮಿಗಿಲು
ಎಂಬುದರಲ್ಲಿ ಎರಡು ಮಾತಿಲ್ಲ.
ಅದರಲ್ಲೂ ಹಿಂದೂ ಧರ್ಮದ ಕೆಲವು
ಸಂಪ್ರದಾಯಗಳು ಅಕಾರಣ
ನಂಬಿಕೆಗಳಂತೆ ತೋರುತ್ತವಾದರೂ
ಅವು ನೈಜವಾಗಿ ಅಕಾರಣ
ನಂಬಿಕೆಗಳಲ್ಲ. ಅವುಗಳಲ್ಲಿ
ವೈಜ್ಞಾನಿಕ ಸತ್ಯ ಅಡಗಿದೆ
ಎಂಬುದನ್ನು ಮಾತ್ರ
ಮರೆಯುವಂತಿಲ್ಲ. ಅಂತಹ ಕೆಲವು
ಸಂಪ್ರದಾಯಗಳನ್ನು ಈ ಕೆಳಗೆ
ನೋಡೋಣ.
* ನಾವೇಕೆ ಕೈ ಮುಗಿಯುತ್ತೇವೆ?
ನಾವು ಆಪ್ತರನ್ನು ಕಂಡಾಗ ಅಥವಾ
ಹಿರಿಯರನ್ನು ಕಂಡಾಗ ಎರಡೂ
ಕೈಗಳನ್ನು ಜೋಡಿಸಿ
ನಮಸ್ಕರಿಸುತ್ತೇವೆ. ಇದು ಕೇವಲ
ಎದುರಿದ್ದವರನ್ನು ಪ್ರಸನ್ನಗೊಳಿಸುವ
ತಂತ್ರವಲ್ಲ. ಇದರ ಹಿಂದಿರುವ
ವೈಜ್ಞಾನಿಕ ಸತ್ಯ ಹೀಗಿದೆ. ನಾವು
ಎರಡೂ ಕೈಗಳನ್ನು ಜೋಡಿಸಿ ಕೈ
ಮುಗಿಯುವಾಗ ಎರಡೂ ಕೈಗಳ
ಹಸ್ತಗಳು ಒಂದುಗೂಡುತ್ತವೆ. ಎರಡೂ
ಕೈಗಳ ಬೆರಳ ತುದಿಗಳು
ಒತ್ತಲ್ಪಡುತ್ತವೆ. ಈ ಹತ್ತೂ ಬೆರಳ
ತುದಿಗಳಲ್ಲಿ ಒತ್ತಡ ಬಿಂದುಗಳಿವೆ.
ನಮಸ್ಕರಿಸುವಾಗ ಇವು
ಒತ್ತಲ್ಪಡುವುದರಿಂದ ಕಣ್ಣು, ಕವಿ
ಹಾಗೂ ಮನಸ್ಸು ಸಕ್ರಿಯವಾಗುತ್ತವೆ.
ಇದರಿಂದ ನಾವು ನಮಸ್ಕರಿಸುವ
ವ್ಯಕ್ತಿಯ ಚಿತ್ರ ನಮ್ಮ
ಮನಃಪಟಲದಲ್ಲಿ ಮೂಡಿ ಅವರು ನಮ್ಮ
ನೆನಪಿನಲ್ಲಿ ಉಳಿಯುತ್ತಾರಂತೆ.
* ಕಾಲುಂಗುರ ಏಕೆ?
ಮುದುವೆಯಲ್ಲಿ ವಧುವಿನ ಕಾಲಿಗೆ ಬೆಳ್ಳಿ
ಕಾಲುಂಗುರ ತೊಡಿಸುತ್ತಾರೆ. ಬೆಳ್ಳಿ
ಕಾಲುಂಗುರ ಹೆಣ್ಣು ಮಕ್ಕಳಿಗೇ ಏಕೆ?
ಅದು ಎರಡನೆಯ ಕಾಲ್ಬೆರಳಿಗೇ ಏಕೆ?
ಎಂಬೆಲ್ಲ ಪ್ರಶ್ನೆಗಳು ನಮ್ಮನ್ನು
ಕಾಡಬಹುದು. ಇದು ಕೇವಲ ಹಿಂದೂ
ಸಂಪ್ರದಾಯವಷ್ಟೇ ಅಲ್ಲ. ಇದರ
ಹಿಂದಯೂ ಒಂದು ವೈಜ್ಞಾನಿಕ ಕಾರಣ
ಇದೆ. ಸ್ತ್ರೀಯರ ಎರಡನೆಯ ಬೆರಳಿನಿಂದ
ಒಂದು ನರ ಆಕೆಯ ಗರ್ಭಾಶಯದ
ಮೂಲಕ ಹೊರಟು ಆಕೆಯ ಹೃದಯವನ್ನು
ತಲುಪುತ್ತದಂತೆ. ಅದರಲ್ಲಿ ಬೆಳ್ಳಿ
ಉತ್ತಮ ವಿದ್ಯುತ್ ವಾಹಕ. ಎರಡನೆಯ
ಕಾಲ್ಬೆರಳಿಗೆ ಬೆಳ್ಳಿ ಕಾಲುಂಗುರ
ಧರಿಸುವುರಿಂದ ಅದು ಭೂಮಿಯ
ಧನಾತ್ಮಕ ಶಕ್ತಿಯನ್ನು ದೇಹದ
ಮೂಲಕ ಪಸರಿಸುವುದಲ್ಲದೆ ಅವಳ
ಋತು ಚಕ್ರ ಸರಾಗವಾಗಲು
ಸಹಕರಿಸುತ್ತದೆಯಂತೆ.
* ಹಣೆಗೆ ಕುಂಕುಮ ಅಥವಾ
ತಿಲಕವಿಡುವುದೇಕೆ?
ನಾವು ಸಾಮಾನ್ಯವಾಗಿ
ದೈವಭಕ್ತಿಯ ಸಂಕೇತವೆಂಬಂತಲೋ
ಅಥವಾ ನಮ್ಮದೇ
ಸಂಪ್ರದಾಯವೆಂಬಂತೆ ಹಣೆಗೆ ಕುಂಕುಮ
ಅಥವಾ ತಿಲಕವನ್ನಿಡುತ್ತೇವೆ.ಇದು
ಕೂಡ ವೈಜ್ಞಾನಿಕ ದೃಷ್ಠಿಯಿಂದ
ಒಳ್ಳೆಯದೇ. ನಮ್ಮ ಎರಡೂ
ಹುಬ್ಬುಗಳ ಮಧ್ಯೆ ಆಜ್ಞಾ ಚಕ್ರವಿದೆ.
ಅದೇ ಜಾಗೆಯಲ್ಲಿ ಮುಖ್ಯ
ನರಬಿಂದುಗಳು ಸಂಧಿಸುತ್ತವೆ. ಅಲ್ಲಿ
ಕುಂಕುಮ ಅಥವಾ ತಿಲಕವಿಟ್ಟಾಗ ಅಲ್ಲಿ
ಆ ಮುಖ್ಯ ನರ ಬಿಂದು ಒತ್ತಲ್ಪಟ್ಟು
ನಾವು ಏಕಾಗ್ರತೆಯನ್ನು
ಹೊಂದುತ್ತೇವಂತೆ. ಅದಲ್ಲದೆ ಇದು
ಮುಖದ ಸ್ನಾಯುಗಳನ್ನು
ಉಲ್ಲಸಿತಗೊಳಿಸುತ್ತದೆಯಂತೆ.
* ದೇವಸ್ಥಾನದಲ್ಲಿ ಗಂಟೆ
ಬಾರಿಸುವುದೇಕೆ?
ಇದೇ ಪ್ರಶ್ನೆಯನ್ನು ನನ್ನ
ವಿದ್ಯಾರ್ಥಿಗೆ ಕೇಳಿದಾಗ, "ದೇವರನ್ನ
ಎಬ್ಬಿಸೋಕೆ" ಅಂತ ತರಲೆ ಉತ್ತರ
ನೀಡಿದ್ದುಂಟು. ದೇವಸ್ಥಾನದಲ್ಲಿ
ಗಂಟೆ ಬಾರಿಸುವದರ ಹಿಂದೆಯೂ ಒಂದು
ವೈಜ್ಞಾನಿಕ ಕಾರಣ ಇಲ್ಲದಿಲ್ಲ. ಗಂಟೆ
ಬಾರಿಸುವುದರಿಂದ ಸುತ್ತಮುತ್ತಲಿನ
ಋಣಾತ್ಮಕ ಶಕ್ತಿಗಳು
ಹಿಮ್ಮೆಟ್ಟುತ್ತವಂತೆ. ಅದಲ್ಲದೇ
ಗಂಟೆಯ ಶಬ್ದ ಸುಮಾರು 6 ರಿಂದ 7
ಸೆಕೆಂಡುಗಳ ಕಾಲ ಅನುರಣಿಸುವುದರಿಂದ
ನಮ್ಮ ಮನಸ್ಸು ಏಕಾಗ್ರತೆಯನ್ನು
ಹೊಂದುವುದಲ್ಲದೆ ಶಾಂತಿಯನ್ನು
ಪ್ರತಿಷ್ಠಾಪಿಸಿಕೊಳ್ಳಲು
ಸುಲಭವಾಗುತ್ತದಂತೆ. ಹಾಗೆಯೇ
ನಮ್ಮ ಮೆದುಳಿನ ಎಡಭಾಗ ಹಾಗೂ
ಬಲಭಾಗ ಸಮೀಕರಣಗೊಂಡು ಮನಸ್ಸು
ಶಾಂತವಾಗುತ್ತದಂತೆ.
* ಕೈ ಕಾಲುಗಳಿಗೆ ಮೆಹೆಂದಿ
ಹಾಕಿಕೊಳ್ಳುವುದೇಕೆ?
ಗೋರಂಟಿ ಒಂದು ಔಷಧೀಯ
ಗಿಡಮೂಲಿಕೆ ಎಂಬುದು ಎಲ್ಲರಿಗೂ ತಿಳಿದ
ವಿಷಯ.ಅದು ಸೌಂದರ್ಯವರ್ಧಕವೂ ಹೌದು.
ಸಾಮಾನ್ಯವಾಗಿ ನಮ್ಮ ಹೆಣ್ಣು
ಮಕ್ಕಳು ಹಬ್ಬ ಹರಿದಿನಗಳಲ್ಲಿ ಹಾಗೂ
ವಿವಾಹ ಸಂದರ್ಭಗಳಲ್ಲಿ ಮೆಹೆಂದಿ
ಹಾಕಿಕೊಳ್ಳುತ್ತಾರೆ. ಈ
ಸಮಾರಂಭಗಳಿಗಾಗಿ ಅವರು ಅನೇಕ
ಕೆಲಸ ಕಾರ್ಯಗಳಲ್ಲಿ ತೊಡಗಿ
ದಣಿದಿರುತ್ತಾರೆ. ಅವರ ದಣಿವನ್ನು ಈ
ಗೋರಂಟಿ ಕಳೆಯುತ್ತದೆ. ಓಡಾಡಿ
ಸುಸ್ತಾದ ಕೈ ಕಾಲುಗಳಿಗೆ ಗೋರಂಟಿ
ಹಚ್ಚುವುದರಿಂದ ದಣಿವು
ಮಾಯವಾಗುತ್ತದೆ ಹಾಗೂ ದೇಹ
ತಂಪಾಗುತ್ತದೆ ಎನ್ನುವುದು ಇದರ
ಹಿಂದಿನ ವೈಜ್ಞಾನಿಕ ಸತ್ಯ.
* ಪಾದ ಸ್ಪರ್ಶ ನಮಸ್ಕಾರ ಏಕೆ?
ಹಿಂದೂ ಧರ್ಮದ ಮತ್ತೊಂದು ರೀತಿಯ
ಸಂಸ್ಕಾರವೆಂದರೆ ಪಾದ ಸ್ಪರ್ಶ
ನಮಸ್ಕಾರ. ಇದೊಂದು
ಸಂಸ್ಕಾರವಷ್ಟೇ ಅಲ್ಲ. ಇದೊಂದು
ಬಗೆಯ ವ್ಯಾಯಾಮವೂ ಕೂಡ ಹೌದು.
ಪಾದ ಸ್ಪರ್ಶ ನಮಸ್ಕಾರ ಮಾಡುವಾಗ
ನಾವು ಸಾಮನ್ಯವಾಗಿ ಬಾಗುತ್ತೇವೆ.
ಇದರಿಂದ ನಮ್ಮ ಅಹಂಕಾರ
ದೂರವಾಗುತ್ತದೆಯಂತೆ. ಎದುರಿನ
ವ್ಯಕ್ತಿಯಲ್ಲಿ ನಮ್ಮ ಬಗೆಗೆ
ಪ್ರೀತ್ಯಾದರಗಳು ಮೂಡುತ್ತವಂತೆ.
ಭೂಮಿಯ ಧನಾತ್ಮಕ ಶಕ್ತಿಗಳು ಆ
ಎದುರಿಗಿರುವ ವ್ಯಕ್ತಿಯಿಂದ ಪಸರಿಸಿ
ಕೈಗಳ ಮೂಲಕ ನಮ್ಮ ದೇಹವನ್ನು
ತಲುಪುತ್ತವಂತೆ. ಇದಲ್ಲದೆ
ವ್ಯಕ್ತಿಯೊಂದಿಗಿನ ಭಾವನಾತ್ಮಕ
ಸಂಬಂಧಗಳು ಗಟ್ಟಿಯಾಗುತ್ತವಂತೆ.
* ನೆಲದ ಮೇಲೆ ಕುಳಿತು ಊಟ
ಮಾಡುವುದೇಕೆ?
ಹಿಂದೂ ಸಂಪ್ರದಾಯದಲ್ಲಿ ಮದುವೆ
ಹಾಗೂ ಮುಂತಾದ ಸಮಾರಂಭಗಳಲ್ಲಿ
ಮುಂಚೆಯಲ್ಲ ಕುಳಿತು ಊಟ ಮಾಡುವ
ಪದ್ಧತಿಯೇ ಇತ್ತು. ಈಗಲೂ
ಇದೆಯಾದರೂ ಮುಂಚಿನಂತಿಲ್ಲ. ಬಫೇ
ಸಿಸ್ಟಂ ಎಲ್ಲಡೆ ಕಾಣ ಸಿಗುತ್ತಿದೆ.
ಮನೆಗಳಲ್ಲೂ ಡೈನಿಂಗ್ ಟೇಬಲ್
ಬಂದಿರುವ ಕಾರಣ ನೆಲದ ಮೇಲೆ ಕುಳಿತು
ಊಟ ಮಾಡುವ ಅಭ್ಯಾಸ ಮರೆತೇ
ಹೋಗಿದೆ.
ನೆಲದ ಮೇಲೆ
ಕುಳಿತುಕೊಳ್ದಳುವುದರಿಂದ ನಾವು
ಅರ್ಧ ಪದ್ಮಾಸನ
ಹಾಕಿದಂತಾಗುತ್ತದೆ.ಇದರಿಂದ ಜೀರ್ಣಾಂಗವ್ಯೂಹದ
ಅಂಗಗಳು ಸರಾಗವಾಗಿ
ಕಾರ್ಯನಿರ್ವಹಿಸಲು ಅನುವಾಗುತ್ತದೆ.
ಮನಸ್ಸು ಶಾಂತವಾಗುವುದಲ್ಲದೇ
ಜೀರ್ಣಕ್ರಿಯೆ ಸರಾಗವಾಗುತ್ತದೆ.
ಎರಡೂ ತೊಡೆಗಳು
ಅಗಲವಾಗುವುದರಿಂದ ಜಠರ ಹಾಗೂ
ಕರುಳುಗಳು ಹಿಗ್ಗಿ ಎಲ್ಲವೂ
ಹಿತವಾಗುತ್ತದೆ ಎಂಬುದು ಇದರ ಹಿಂದಿನ
ವೈಜ್ಞಾನಿಕ ಸತ್ಯ.
ಸಂಪ್ರದಾಯಗಳು ಸಂಸ್ಕಾರಗಳು
ಏನೇ ಇರಲಿ. ಅವು ನಮ್ಮ ಹಾಗೂ
ನಮ್ಮ ಸುತ್ತಮುತ್ತಲಿನ ಸಮಾಜಸ
ಸ್ವಾಸ್ಥ್ಯವನ್ನು
ಸುಧಾರಿಸುವಂತಿದ್ದರೆ ಅವನ್ನು ನಮ್ಮ
ಇಂದಿನ ರಾಕೆಟ್ ಬದುಕಿನಲ್ಲಿ
ಅಳವಡಿಸಿಕೊಳ್ಳುವುದರಲ್ಲಿ
ತಪ್ಪೇನು?
--- ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....