ಹಾಯ್ಕುಗಳು

1
ಇರುಳ ಸೆರಗಲ್ಲಿ
ತಾರೆಗಳು
ಎದೆಯ ಗೂಡಲ್ಲಿ
ಸುಡುವ ಕೆಂಡಗಳ ರೀತಿ

2
ಉಳ್ಳವರು
ಇಲ್ಲದವರ ಆಳುತಿಹರು
ಕೂಡಲ ಸಂಗಮ ದೇವ
ಎಲ್ಲಿ ಬಸವಣ್ಣ?

3
ತೀರಕ್ಕೆ ಮುತ್ತಿಡುವ ತೊರೆ
ಹೊದ್ದ ಬೇಗುದಿಯೆಷ್ಟೋ?
ಸಾಗರದ ಎದೆಯೊಳಗೆ

4
ಅವಳ ಕಮಲದಂತ
ನಯನದ್ವಯಗಳಿಗೆ
ನನ್ನ ಮನದುಂಬಿ
ಬಿಡದೇ ಎಡತಾಕಿದೆ
ಜೀವನ ಮಧುಪಾನಕ್ಕಾಗಿ


--- ರನ್ನ ಕಂದ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...