ಹಳೆಯ ಪ್ರೇಮ ಪತ್ರವೇ,

ಹಳೆಯ ಪ್ರೇಮ ಪತ್ರಗಳನ್ನು ಜೋಪಾನವಾಗಿಟ್ಟಿದ್ದೇನೆ. ಆಗಾಗ ನಾನು ಹಾಗೂ ನನ್ನ
ಪ್ರೇಯಸಿ(ಈಗ ಹೆಂಡತಿ ಎಂಬ ಹೆಚ್ಚುವರಿ ಹುದ್ದೆಯಲ್ಲಿದ್ದಾಳೆ) ಸೇರಿ ಓದುತ್ತ ಹಳೆಯ
ನೆನಪುಗಳನ್ನ ಮೆಲುಕು ಹಾಕುತ್ತಿರುತ್ತೇವೆ. ಅದರಂತೆ ಆಗ ಹಾಗಿದ್ದು ಈಗ ಬದಲಾದ ನನಗೆ
ಈಕೆ ಬಯ್ಯುತ್ತಿರುತ್ತಾಳೆ. ಆಗ ನಾವಿದ್ದ ರೀತಿ, ಒಬ್ಬರಿಗೊಬ್ಬರು ಸಂತೈಸುತ್ತಿದ್ದ
ರೀತಿ,ಪ್ರೀತಿಯ ತೀಕ್ಷ್ಣತೆ ಎಲ್ಲವನ್ನೂ ಈಗಿನ ಬದಲಾವಣೆಯೊಂದಿಗೆ ಮೌಲ್ಯಮಾಪನ
ಮಾಡುತ್ತೇವೆ. ಆಕೆ ಆಗ ನನ್ನಿಂದ ದೂರವಿದ್ದಾಗ ತಾನು ವಿರಹ, ನಾನು ಅವಳಿಲ್ಲದೇ ಪಟ್ಟ
ಒಂಟಿತನ ಮುಂತಾದವುಗಳು ನಂಮ ಈಗಿನಪ್ರೀತಿಯನ್ನ ಇನ್ನಷ್ಟು ಗಟ್ಟಿಗೊಳಿಸುತ್ತವೆ.
ಆದ್ದರಿಂದ ನೀವು ಆಗಾಗ ಪ್ರೇಮ ಪತ್ರಗಳನ್ನು ಓದಲು ಶುರುಮಾಡಿ.
ಬೇರೆ ಹುಡುಗಿ ಬರೆದ ಪತ್ರ ಓದೀರಾ ಜೋಕೆ!

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...