ನನ್ನ ಕವಿತೆ

ನನ್ನ ಕವಿತೆ ಸಮಾಜ ಮುಖಿ
ಎಲ್ಲ ಸ್ತರಗಳಲ್ಲೂ ಪರಮ ಸುಖಿ
ನನ್ನ ಕವಿತೆಯ ಆಯಾಮಗಳು ಹಲವು
ನೋವು, ನಲಿವು, ಒಲವು ಗೆಲುವು
ಹೀಗೆ.ಸಾಗುತ್ತದೆ ನನ್ನ ಕವಿತೆ..
ಹಸಿದ ಉದರದ ಬೆಂದ ಬಿಸಿ
ಅಸ್ಪೃಶ್ಯರೆಂಬ ಹಣೆಪಟ್ಟಿಯ ಕರಾರು
ಅಲ್ಪರೆಂಬ ಏಕಾಕಿ ಭಾವದೊಳಗಿನ
ಹುನ್ನಾರ
ಜನಿವಾರ, ವಿಭೂತಿ ಜುಟ್ಟು ನಮಾಜು
ಎಂಬ
ವಿಧಿ ವಿಧಾನಗಳ ಅಡಿಯಲ್ಲಿ ಸಿಕ್ಕ ಧರ್ಮ
ಎಲ್ಲ. ಮರ್ಮಗಳ ಕರ್ಮ ಸಿದ್ಧಾಂತ
ನನ್ನ ಕವಿತೆ..
ಲಂಚಾವತಾರಗಳ ಪ್ರಭಾವಳಿಯಲ್ಲಿ
ಬದುಕುವ ಉಪಾಯ
ದುರಿತ ಕಾರ್ಯಕೆ ಅರಿತವರಿಂದಲೇ
ಮಸ್ತಾಭಿಷೇಕ
ಶರಣ-ಶರಣೆಯರ ಲಿಂಗಾಂಗ ಷಟ್ ಸ್ಥಲ
ಸೋಪಾನ
ವಚನ ಗದ್ಯ ಪದ್ಯಗಳಲಿ ಅತ್ಯಂತ
ಜೋಪಾನ
ಮಾತಿನ ಲಯಕ್ಕೆ ಸಿಗದ ನಡೆವಳಿ
ನಡೆವಳಿ ಇಲ್ಲದೇ ಬರಿಮಾತಿನ ಬಳುವಳಿ
ಎಲ್ಲದರ ಸಮ ಸಮನಾದ ಸಮಷ್ಠಿ
ಔಈತಿಯಿಂದಾವರಿಸಿರುವ ಮನಗಳಲಿ
ಕಾಣುವುದೇ ಪ್ರೀತಿ?
ಮೇಲೆ ತುಂಬಿರುವ ಮನಸುಗಳು ಇರುಳ
ತಾರೆಗಳ ರೀತಿ
ಇರುಳ ಸೆರಗಿನಲಿ ಕೋಟಿ ರಂಧ್ರಗಳಂತೆ
ತಾರೆ
ಮಿನುಗುತ್ತಲೇ ಮಾಯವಾಗುತಿದೆ
ಪ್ರೀತಿ
ಸಂತೃಪ್ತಿಯೆಂಬುದು ಕತ್ತಲೆಯಲಿ
ಹುಡುಕುವ
ಕರಿಮಣಿಯ ಮಾಲೆಯಂತೆ ತೋರಿದರೂ
ಹುಡುಕಲೆತ್ನಿಸುತಿದೆ ನನ್ನ ಕವಿತೆ
ಬದುಕೆಂಬ ಭಾರಿ ಜೂಜಾಟದಲಿ
ಗೆದ್ದವರು ವಿರಳ
ಗೆಲುವಲ್ಲೇ ಬೆರೆತಿವೆ ಸೋಲುಗಳ ಹೆರಳ
ನಾನು ನೀನು ಆನು ತಾನು
ಭಾಗ್ಯವಾಗುತಿದೆ
ಒಳಗಣ್ಣ ತೆರಸಿ ಒಳದನಿಯ ನುಡಿಸಿ
ಹಾಡಲೆತ್ನಿಸುತಿದೆ ಈ ನನ್ನ ಕವಿತೆ..
--- ಸಚಿನ್ ಕುಮಾರ ಬಿ.ಹಿರೇಮತಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....