ಪ್ರೀತಿಯ ಚಂಪಾಗೊಂದು ಪತ್ರ
ಪ್ರಿಯ ಚಂಪಾ ಅವರೇ.
ನನ್ನ ಚಿಕ್ಕಪ್ಪ ಪಿಎಚ್ಡಿ ಮಾಡಿದ್ದು ನಿಂಮ ಸಂಕ್ರಮಣದ ಮೇಲೆ. 'ಸಾಹಿತ್ಯ
ಪತ್ರಿಕೆಯಾಗಿ ಸಂಕ್ರಮಣ' ಎಂಬ ತಲೆಬರಹದ ಪಿಎಚ್ಡಿ ಮಹಾ ಪ್ರಬಂಧವದು. ಅದನ್ನು ಓದುತ್ತಾ
ತಂಮ ವ್ಯಕ್ತಿತ್ವ ಒಂದು ಮಾದರಿಯಾಗಿ ಬೆಳೆಯಿತು. ಹಳೆಯ ಪತ್ರಿಕೆಗಳನ್ನು ಓದಿದೆ. ನಿಂಮ
'ಬಾನುಲಿ' ಎಂಬ ಕವನ ಸಂಕಲನವಂತೂ ನನ್ನ ಕವಿತೆಗಳಿಗೂ ಸ್ಭೂರ್ತಿಯಾದದ್ದು ಸುಳ್ಳಲ್ಲ.
ತಾವು ನಿರಪೇಕ್ಷ, ಯಾರನ್ನೂ ನೋಯಿಸದ ಓಲೈಸದ ಸಾಹಿತಿಯೆಂದು ಹಂಚಿದೆ. ಆದರೆ ಮೊನ್ನೆ
ತಾವು ನೀಡಿದ ಹೇಳಿಕೆ ಕೇಳಿ ಆಶ್ಚರ್ಯವಾಯಿತು. ದಬ್ಬಾಳಿಕೆ ವಿರುದ್ಧ ದನಿಯೆತ್ತಿ
ಜೈಲಿಗೆ ಹೋಗಿಬಂದ ತಾವು, ಇಂದು ಅದೇ ವರ್ಗದ ಪ್ರಭಾವಕ್ಕೊಳಗಾಗಿಯೋ ಅಥವಾ ಇನ್ನಾವುದೋ
ಕಾರಣದಿಂದ ತಪ್ಪಾದ ಹೇಳಿಕೆ ನೀಡಿದ್ದೀರಿ. ಬ್ರಾಹ್ಮಣರು ಅಂದು ಶೋಷಣೆ ಮಾಡಿದ್ದಾರೆ.
ಒಪ್ಪೋಣ. ಆದರೆ ಈಗ ಅದರ ಪ್ರತೀಕಾರ ತೆಗೆದುಕೊಳ್ಳುವುದು ತಪ್ಪು. ಒಂದು ವರ್ಗವನ್ನು
ಬಹಿಷ್ಕರಿಸುವ ನೈತಿಕತೆ ನಿಮಗಿದೆಯೇ? ಇಂತಹ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ
ಕೆಡಿಸುವುದು ತರವೇ?
ಬರೆಹಗಳ ಮೂಲಕ ಜನರೆದೆಯಲ್ಲಿ ಶಾಂತಿಯನ್ಧು ಬಿತ್ತಿ. ಸುಡುವ ದ್ವೇಷವನ್ನಲ್ಲ.
-- ಇಂತಿ ನಿಂಮ ಸಾಹಿತ್ಯಾಭಿಮಾನಿ

Comments