ಗಜಲ್ :
ಭಾವಗಳು ಕಡೆದ ಮನಸಿನ ನವನೀತ
ಕರಗಬಹುದು ನಿನ್ನ ನೆದರಿನ ಕಾವು ವಿಪರೀತ
ತುಟಿಗೆ ಅಂಟಿದ ನಗೆಯ ಮಾತಿನ ಪ್ರವರ
ಮೌನಕೆ ನಾನೀಗ ತೆರುವ ಬೆಲೆ ನಿಖರ
ಕನಸುಗಳ ಬುತ್ತಿಯೊಳಗೆ ರುಚಿಗಿಷ್ಟು ಹುಡುಕಾಟ
ನನಸಾಗದೇ ಉಳಿದ ನೆನಪುಗಳ ತಡಕಾಟ
ಎದೆಯ ಚಂದಿರನಿಗೆ ದಿನವೂ ಹುಣ್ಣಿಮೆಯಾಗುವಾಸೆ
ಮನಸು ಮನಸುಗಳು ನಡುವೇ ನೋಟವೇ ಹಿತವಾದ ಭಾಷೆ
ಬಾಳ ಪಯಣದ ಕೊನೆಗೆ ಸಿಕ್ಕ ಉತ್ತರಗಳು ಅಸ್ಪಷ್ಟ
ತಿದ್ದಬಹುದಾದ ತಪ್ಪುಗಳು ಈಗೀಗ ನಿಕೃಷ್ಟ
--- ರನ್ನ ಕಂದ
ಕರಗಬಹುದು ನಿನ್ನ ನೆದರಿನ ಕಾವು ವಿಪರೀತ
ತುಟಿಗೆ ಅಂಟಿದ ನಗೆಯ ಮಾತಿನ ಪ್ರವರ
ಮೌನಕೆ ನಾನೀಗ ತೆರುವ ಬೆಲೆ ನಿಖರ
ಕನಸುಗಳ ಬುತ್ತಿಯೊಳಗೆ ರುಚಿಗಿಷ್ಟು ಹುಡುಕಾಟ
ನನಸಾಗದೇ ಉಳಿದ ನೆನಪುಗಳ ತಡಕಾಟ
ಎದೆಯ ಚಂದಿರನಿಗೆ ದಿನವೂ ಹುಣ್ಣಿಮೆಯಾಗುವಾಸೆ
ಮನಸು ಮನಸುಗಳು ನಡುವೇ ನೋಟವೇ ಹಿತವಾದ ಭಾಷೆ
ಬಾಳ ಪಯಣದ ಕೊನೆಗೆ ಸಿಕ್ಕ ಉತ್ತರಗಳು ಅಸ್ಪಷ್ಟ
ತಿದ್ದಬಹುದಾದ ತಪ್ಪುಗಳು ಈಗೀಗ ನಿಕೃಷ್ಟ
--- ರನ್ನ ಕಂದ
Comments