ಬೆಳಕು

ಬೆಳಕನೂಡುವ
ಹಣತೆ
ತಮವ ತಿರಿಯಿತು
ತನ್ನ ಕೆಳಗೊಂಡಿಷ್ಟು ಬಿಟ್ಟಿತೇಕೋ
ನಾನರಿಯೆ
ಕತ್ತಲೆಂದರೇ ಬೆಳಕಿಗೆ
ಹಿರಿ ಹಿರಿ ಹಿಗ್ಗು
ನುಗ್ಗಿ ಎಲ್ಲ ನುಂಗಿ ಹಾಕಬಹುದಲ್ಲ!
ಕತ್ತಲೆಗೂ ಅಷ್ಟೇ
ಬೆಳಕಿನಲ್ಲಡಗಿ ಹೋಗುವ ತವಕ
ಹ್ಯಾಗೋ ಒಂದು ರೀತಿ
ಆದರೆ ಸಾಕು ಪುನೀತ
ಬೆಳಕೆಂದರೆ ಬೆಂಕಿ ಶಾಖ
ಎನ್ನುವುದು ವಿಜ್ಞಾನ
ಒಳಿತು ಅರಿವು ಎನ್ನುತ್ತದೆ
ಬರೀ ಜ್ಝಾನ
ಬೆಳಕೆಂದರೆ ಎದೆಯ ನಗು
ಕಣ್ಣ ಹೊಳಪು, ಆತ್ಮಜ್ಞಾನ
ಎಂದಷ್ಟೇ ನನ್ನ ಮಾತು
-- ರನ್ನ ಕಂದ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....