ಕುಣಿದಳಾ ಶಾಂತಲೆ.....

ಸಂಜೆ ಅವಸರದಲ್ಲಿ ಕೆಲಸ ಮುಗಿಸಿ ಆಫೀಸಿನಿಂದ ಹೊರಟ ರವೀಂದ್ರ. ಆಪ್ತ ಗೆಳತಿ ಶಾಂತಲೆಯನ್ನು ಭೇಟಿ ಮಾಡಲೆಂದು ಸೂರ್ಯಾಸ್ತದೆಡೆ ಮುಖ ಮಾಡಿ ಊರ ಪಕ್ಕದ ಗುಡ್ಡ ಒಂದರಲ್ಲಿನ ದೇವಸ್ಥಾನದೆಡೆಗೆ ನಡೆದ. ಅದು ಅವರಿಬ್ಬರ favourite ತಾಣ. ದಾರಿಯಲ್ಲಿ ಅವನ ಆಲೋಚನೆಗಳು ಒಂದೊಂದಾಗಿ ಗರಿ ಬಿಚ್ಚಿದವು. ಶಾಂತಲೆ ಈಗ ಹೇಗಿರಬಹುದು? ಮೊದಲಿನಷ್ಟೇ ಸಲುಗೆಯಿಂದಲೇ ನನ್ನನ್ನು ಮಾತನಾಡಿಸುವಳಾ? ಅವಳ ಎರಡು ವರ್ಷದ ಇಂಗ್ಲೆಂಡ್ ಜೀವನ ಅವಳಲ್ಲಿ ಏನಾದರೂ ಬದಲಾವಣೆ ತಂದಿರಬಹುದಾ? ಅವಳನ್ನು ಹೇಗೆ propose ಮಾಡಲಿ?ಒಪ್ಪುವಳಾ? ಒಪ್ಪಿದರದು ತನ್ನ ಪುಣ್ಯ, ಇಲ್ಲದಿದ್ದರೆ ಅವಳೊ0ಂದಿಗಿನ ತನ್ನ  ಸ್ನೇಹ ಬಾಂಧವ್ಯಕ್ಕೆ ಎಲ್ಲಿ ಚ್ಯುತಿ ಬರುವುದೋ! ಆದರೂ ಅವಳ ಬಗೆಗಿನ ತನ್ನ ಭಾವನೆಗಳನ್ನು ಮುಚ್ಚಿಡುವುದು ಸಾದ್ಯವಿಲ್ಲ, ಹಾಗಂತ ಹೇಳಿಕೊಳ್ಳಲು ಇದು ಸುಸಮಯವೂ ಅಲ್ಲ. ಈ ಸಂಗತಿಯು ಅವನಿಗೆ ಬಿಸಿ ತುಪ್ಪದಂತೆ ಭಾಸವಾಯಿತು.&n ಈಗ ಬೇಡ, ಸುಸಮಯ ನೋಡಿ ಹೇಳಿದರಾಯಿತು ಎಂದುಕೊಳ್ಳುತ್ತಲೇ ಪ್ರೀತಿ ಮತ್ತು ಚಿಂತೆ ತುಂಬಿದ ಭಾರವಾದ ಹೃದಯ ಹೊತ್ತು ದೇವಸ್ಥಾನದ ವ್ಯಾಪ್ತಿ ಪ್ರವೇಸಿಸಿದ.
ಈತನಿಗಾಗಿ ಕಾಯುತ್ತ ಕುಳಿತಿದ್ದ ಶಾಂತಲೆ ಉಲ್ಲಾಸದಿಂದ ಹತ್ತಿರ ಬಂದು "ಏನೋ ರವಿ, ಇಷ್ಟೊಂದು ಕರಗ್ಹೋಗಿ ಬಿಟ್ಟಿದ್ದೀಯಾ? ಏನೋ ಚಿಂತೆ ಮಾಡೋ ಥರಾ ಸಪ್ಪಗಿದ್ದೀಯಾ?" ಎಂದಳು. "ಹಾಗೇನಿಲ್ಲ, ಆಫೀಸಲ್ಲಿ ಕೆಲಸ ಜಾಸ್ತಿಯಲ್ವಾ? ಹಾಗಾಗಿ ಸುಸ್ತಾಗಿದೆ ಅಷ್ಟೇ" ಎನ್ನುತ್ತಾ ತಮ್ಮ ಎರಡು ವರ್ಷದ ಸ್ನೇಹದ ಬಗ್ಗೆ, ಆಗಿನ ಘಟನೆಗಳ ಬಗ್ಗೆ ಮಾತನಾಡುತ್ತ, ಆಗಾಗ ಘಟಿಸಿದ ಪೇಚಿನ, ಮೋಜಿನ ಸಂಗತಿಗಳನ್ನು ಖುಷಿಯಿಂದ ಹಗುರಾಗಿ ಸವಿಯುತ್ತಾ ಅಲೆದಾಡಿದರು..

ಮಾತೆಲ್ಲಾ ಮುಗಿಸಿ ಮನೆಗೆ ಬಂದ ರವೀಂದ್ರ, ಕೈಕಾಲು ಮುಖ ತೊಳೆದು ದೇವರಿಗೆ ನಮಸ್ಕರಿಸಿ ತಾನೇ ಮಾಡಿದ ಕಾಫೀಯನ್ನು ಹೀರುತ್ತಾ ಮತ್ತೇ ಮನಸ್ಸನ್ನು ಶಾಂಯಲೆಯತ್ತ ಹರಿಬಿಟ್ಟ. ಶಾಂತಲೆಯ ವರ್ತನೆಗಳು ಹಾಗೂ ತನ್ನ ಬಗೆಗಿನ ಅವಳ  ಯಾವುದೆ ಭಾವನೆಗಳು ಬದಲಾಗಿಲ್ಲವೆಂದುಕೊಂಡ. ಮತ್ತದೇ ಚಿಂತೆ. propose ಮಾಡಲಾ ಹೇಗೆ? ನಾಟ್ಯ ಮಯೂರಿಯಾದ ಶಾಂತಲೆ ತನ್ನ ಜೀವನದಲ್ಲೂ ಅಷ್ಟೇ ಉಲ್ಲಾಸದಿಂದ ಕುಣಿಯಲೊಪ್ಪುವಳೇ?ಈ ಪ್ರೀತಿಯ ದೆಸೆಯಿಂದ ಅವಳ ಸ್ನೇಹವನ್ನು ಕಳೆದಿಕೊಳ್ಳುವಂತಿಲ್ಲ.ತನ್ನ ಜೀವನದಲ್ಲಿ ಅವಳ ಸ್ನೇಹ ಅದೆಷ್ಟು ಅಮೂಲ್ಯವಾದುದು! ಅವಳ ಸ್ನೇಹ ಹಸ್ತವಿಲ್ಲದಿದ್ದರೆ   ಬಹುಶಃ ತಾನೀಗ ಅವಳ ಮನೆಯ ಗೇಣಿಯಾಗಿಯೇ ದುಡಿಯಬೇಗುತ್ತಿತ್ತೇನೋ? ಎಂದೆನ್ನುಕೊಳ್ಳುತ್ತ ಅವಳೊಂದಿಗೆ ಗೆಳೆತನವಾದ, ಕೂಡಿ ಆಡಿದ  ಹೀಗೆ ಪ್ರತೀ ಬಾಲ್ಯದ ಘಟನೆಗಳನ್ನೊಮ್ಮೆ ನೆನೆಸಿಕೊಂಡ.
ರವೀಂದ್ರನಿಗೆ ಶಾಲೆಗೆ ಸೇರುವ ಪ್ರಾಯ. ಅಪ್ಪ ತೀರಿದ ಬಳಿಕ ಮಗನನ್ನು ಬೆಳಸುವ ಜವಾಬ್ದಾರಿ ಅಮ್ಮನದಾಯಿತು. ಗೌಡರ ಮನೆಯಲ್ಲಿ ಅವಳ ನಿತ್ಯದ ಕೆಲಸ.ಗೌಡರ ಮಗಳಾದ ಶಾಂತಲೆಯೊಂದಿಗೆ ಇವನಿಗೂ ಶಾಲೆಗೆ ಹೋಗುವ ಆಸೆ. ಆದರೆ ಗೌಡರು ಏನೆನ್ನುತ್ತಾರೆ ಎಂಬ ಭಯ..? ಆದರೆ ಶಾಂತಲೆ ಮಾತ್ರ ಇವನು ಬಂದರೆ ಮಾತ್ರ ಶಾಲೆಗೆ ಹೋಗುವುದಾಗಿ ಹಠ ಹಿಡಿದಾಗ ಗೌಡರು ರವೀಂದ್ರನನ್ನು ಶಾಂತಲೆಯೊಂದಿಗೆ ಶಾಲೆಗೆ ಕಳಿಸಲು ಒಪ್ಪಿದಾಗ ಅಮ್ಮನ ಕಣ್ಣಲ್ಲಿ ನೀರು.ಬಳಿಕ ಇಬ್ಬರದೂ ಬಲು ಚೆಂದಾದ ಜೋಡಿ. ಜೊತೆಗೆ ಆಟ,ಜೊತೆಗೆ ಊಟ, ಜೊತೆಗೆ ಆಗಿನ ಮೋಜು ಮಜಾ,ಅವರ ಆ ಸ್ನೇಹ ಹೈಸ್ಕೂಲಿನಿಂಸ ಕಾಲೇಜಿನವರೆಗೂ ಹೀಗೆಯೆ ಆನಂದದಿಂದ ಸಾಗಿತ್ತು.
ಅವರ ಸ್ನೇಹ ಪರ್ವಕ್ಕೆ ತುಸು ಅಲ್ಪ ವಿರಾಮ ನೀಡುವ ಕಾಲವು ಬಂದೊದಗಿತ್ತು.ಪದವಿ ಮುಗಿಸಿದ ರವೀಂದ್ರ ಬ್ಯಾಂಕೊಂದರಲ್ಲಿ ಕೆಲಸ ಸಂಪಾದಿಸಿದ.ಶಾಂತಲೆಯೂ ಓದಿನಲ್ಲಷ್ಟೇ ಅಲ್ಲದೇ ನ್ರತ್ಯದಲ್ಲಿ ಪ್ರಾವಿಣ್ಯತೆಯನ್ನು ಸಾಧಿಸಿದ್ದಳು. Classical Danceನಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್ ವಿಶ್ವ ವಿದ್ಯಾನಿಲಯದಿಂದ ಅವಳಿಗೆ ಆಹ್ವಾನವೂ ಬಂತು.ಅವಳು ಇಂಗ್ಲೆಂಡ್ ಗೆ ಹೋಗಳು ನಿರ್ಧರಿಸಿದ್ದಳು. ಆದರೆ ರವೀಂದ್ರನಿಗೆ ಅವಲನ್ನು ಬಿಟ್ಟು ಎರೆಡು ವರ್ಷ ಹೇಗಿರುವುದೆಂದು ತಿಳಿಯದೇ ಹೋಯಿತು.ತನ್ನ ಹೃದಯದಲ್ಲಿ ಮೂಡಿದ ನಸುನಳಿಸುವ ಭಾವನೆಗಳನ್ನು ಸಂಗತಿಗಳನ್ನು ಬರೆದಿಡುವ ಒಂದೊಳ್ಳೆ ಹವ್ಯಾಸವನ್ನು ರವೀಂದ್ರ ರೂಢಿಸಿಕೊಂಡಿದ್ದ.ಅವಳಿಂದ ವಾರಕ್ಕೊಂದು ಬರುತ್ತಿದ್ದ ಪತ್ರಗಳನ್ನು ಮಗುವಿನಂತೆ ಜೋಪಾನ ಮಾಡಿದ್ದ. ಅವನಲ್ಲಿ ಅವಲ ಪ್ರತಿ ಪ್ರೀತಿಯೊಂದು ಹುಟ್ಟಿಕೊಂಡಿತ್ತು. ಆದರೆ ಅವಳಿಗೆ ತಿಳಿಸುವುದು ಹೇಗೆ?ಆ ಒಂದು ಸುಸಮಯಕ್ಕಾಗಿ ಆತ ಕಾಯುತ್ತಿದ್ದ.
ಇವತ್ಗತು ಅವಳು ಶಾಶ್ವತವಾಗಿ ಭಾರತದಲ್ಲೆ ನೆಲೆಸುವುದೆಂದು ಖಾತ್ರಿ ಮಾಡಿಕೊಂಡು ಬಂದಿದ್ದಳೆಂಬುದನ್ನು ಕೇಳಿ ರವೀಂದ್ರನಿಗೆ ಎಲ್ಲಿಲ್ಲದ ಸಂತೋಷವಾಗಿತ್ತು.ಏನಾದರೂ ಆಗಲಿ, ಅವಳ ಮನಸ್ಸನ್ನೋಮ್ಮೆ ಪರೀಕ್ಷಿಸಿದರಾಯಿತು ಎಂದು ಕೊಂಡು ಅವಳಿಗೆ ಕೇಳಿಯೆ ಬಿಟ್ಟ.
"ಶಾಂತಲಾ, ನಿನ್ನ ಎರಡು ವರ್ಷದ ಇಂಗ್ಲೆಂಡ್ ಜೀವನ ಹೇಗಿತ್ತೆಂದು ಹೇಳಲೇ ಇಲ್ಲಾ..?" ಎಂದ.ಶಾಂತಲೆ ಮುಮದುವರೆದೆಉ "ಆ ಎರೆಡು ವರಷದ ಜೀವನ ಸುಖ,ಸಂತೋಷ,ದುಃಖ, ತೊಂದರೆ, ಆಸಕ್ತಿ,ಆಲಸ್ಯ ಎಲ್ಲವುಗಳ ಸಮ್ಮಳಿತವಾಗಿತ್ತು. ಯಾವಾಗಲು ಬಿಜಿಯಾಗಿರುವ ಇಂಗ್ಲೆಂಡಿಗರು ಬಿಡುವಿನಲ್ಲಿ ಮನರಂಜನೆ ಪಡೆಯುತ್ತಾರೆ.ನನಗಣತೂ ನನ್ನ ತಾಯ್ನಾಡಿನಿಂದ ದೂರವಿದ್ದುದರಿಂದ ದುಃಖವೂ ಮೆಚ್ಚಿನ ನೃತ್ಯದ ಕಲಿಕೆಯಿಂದ ಸಂತೋಷವೂ ಆಗಿತ್ತು. ಆ ಸಂದರ್ಭದಲ್ಲಿ ನನಗೆ ಏಕೈಕ ಭಾರತೀಯ ಗೆಳತಿಯೊಬ್ಬಳ ಸ್ನೇಹ ಮಾತ್ರ ಬಲವಾಗಿತ್ತು" ಎಂದಳು. ರವೀಂದ್ರ ಮರು ಪ್ರಶ್ನಿಸಿದ. "ನಾನೂ ನಿಂಜೊತೆ ಅಲ್ಲಿರಬೇಕೂಂತ ಅನ್ನಿಸಲಿಲ್ಲವೇ?" ಎಂದ. "ಅನಿಸಿತ್ತು. ಆದರೆ ವಿಧಿಯಿಲ್ಲ. ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳದುಕೊಳ್ಳಲೇಬೇಕಲ್ಲ...?' ಎಂದು ನಗುವಾದಳು.ಆಗ ರವೀಂದ್ರ ಅವಳಿಗೆ ನಾನಾಗಲಿ ನನ್ ನೆನಪಾಗಲೀ ಕಾಡೇ ಇಲ್ಲ.ಎಂದರೆ ಅವಳಲ್ಲಿ ಆ ಭಾವನೆಯಿಲ್ಲದಿರಬಹುದು. ಅಂತೆಂದುಕೊಂಡ.

ಏನೇ ಆಗಲಿ ಅವಳಿಗೆ ತನ್ನ ಮನಸಿನ ಭಾವನೆ ಹೇಳಲೇಬೇಕೆಂದುಕೊಂಡು ಅವಳಿಗೊಂದು ಪತ್ರ ಬರೆದ. ಅದನ್ನು ಹಿಡಿದು ಅವಳ ಮನೆಯತ್ತ ಧಾವಿಸಿದ. ಆದರೆ ಅಲ್ಲಿ ಕಂಡದ್ದೇ ಬೇರೆ. ಮನೆಯ ಮುಂದೆ ಹಲವಾರು ಕಾರುಗಳು,ದ್ವಿಚಕ್ರ ವಾಹನಗಳು ಮನೆಯನ್ನೆಲ್ಲಾ ಫಲ ಪುಷ್ಪಗಳೀಂದ ಸಿಂಗರಿಸಿದ್ದಾರೆ.ಮನೆಯಲ್ಲಿ ಬರೀ ಸಂತೋಷದ ಸಂಭ್ರಮದ ಛಾಯೆ. ಏಳೆಂಟು ಜನ ದೊಡ್ಡ ಮನುಷ್ಯರು.ಓಹೋ! ಇವತ್ತು ಬಹುಶಃ ಶಾಂತಲೆಯ engagement ಇರಬೇಕು. ಅವಳಿಗೆ ಈ ಪತ್ರ ನೀಡಿ ಅವಳ ಮನಸ್ಸನ್ನು ಘಾಸಿಗೊಳಿಸುವುದು ಬೇಡ ಎಂದುಕೊಂಡು ವಾಪಸ್ಸಾದ ರವೀಂದ್ರ.
ಸಾಯಂಕಾಲ ಶಾಂತಲೆ ರವೀಂದ್ರನ ಮನನೆಗೆ ಬಂದಳು.ಎರಡಾವರ್ತಿ ಕೂಗಿದಳು. ರವೀಂದ್ರನ ಸುಳಿವಿಲ್ಲ.ಮನೆಯನ್ನೆಲ್ಲಾ ತಡಕಾಡಿದಳು. ಅವನು ಬರೆಯುತ್ತಿದ್ದ ಡೈರಿ ಅವಳ ಕೈಗೆ ಸಿಕ್ಕಿತು.ಬೇರೆಯುವರ ಡೈರಿ ಓದಬಾರದೆಂದುಕೊಂಡು ಮತ್ತೇ ಹಿತ್ತಲದೆಡೆಗೆ ಬಂದಳು.ಅಲ್ಲಿಯೂ ರವೀಂದ್ರನ ಸುಳಿವಿಲ್ಲ. ಅವನ ಸ್ಟಡೀ ರೂಂನ ಮೂಲೆಯಲ್ಲಿ ಒಂದು ಮುದುಡಿ ಮಾಡಿ ಎಸೆದಿದ್ದ ಹಾಳೆಯೊಂದು ಬಿದ್ದಿತ್ತು. ಅದನ್ನು ಬಿಡಿಸಿ ಓದ ತೊಡಗಿದಳು ಶಾಂತಲೆ.

ಪ್ರೀತಿಯ ಶಾಂತಲೆ,
ಬಹುಶಃ ನಿನಗಾಗಿ ಈ ಶಬ್ದವನ್ನು ಬಳಸುವದರಲ್ಲಿ ಯಾವ ನೈತಿಕ ತಪ್ಪೂ ಇಲ್ಲವೆಂದು ಭಾವಿಸುತ್ತೇನೆ.ಇದು ಕೇವಲ ನನ್ನ ಸ್ನೇಹಿತೆಗೆ ಬರೆದ ಪತ್ರವಾಗಿರದೆ ನನ್ನ ಮನದಾಳದ ಅವ್ಯಕ್ತ ಭಾವನೆಗಳನ್ನು ಅಭಿವ್ಯಕ್ತಿಸುವ ಪ್ರಯತ್ನವಾಗಿದೆ.ನಿನ್ನ ಬಗೆಗಿನ ನನ್ನ ಮನೋಭಾವನೆಗಳು, ಬಾಲ್ಯಕ್ಕಿಂತಲೂ ಈಗ ಭಿನ್ನವಾಗಿವೆ.ಆ ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಇದರ ಹೊರತು ಬೇರಾವ ದಾರಿ ಗೋಚರಿಸುತ್ತಿಲ್ಲ.ಈಗಲೂ ನನಗೆ ಎಲ್ಲಿ ನಿನ್ನ ಸ್ನೆಹವನ್ನು ಕಳೆದುಕೊಳ್ಳುತ್ತೀನೋ ಎಂಬ ಭಯವಿದೆ.ಆದರೆ ನಿನ್ನ ಬಗ್ಗೆ ಪ್ರೀತಿ ತುಂಬಿದ ಈ ಹೃದಯದ ಭಾರವನ್ನು ನನ್ನಿಂದ ತಡೆದುಕೊಳ್ಳಲಾಗುತ್ತಿಲ್ಲ.ಅದನ್ನು ಹೇಳಿಕೊಳ್ಳದೆ ವಿಧಿಯಿಲ್ಲ. ತಪ್ಪು ತಿಳಿಯಬೇಡ ಶಾಂತಲಾ, ನಾನು ನಿನ್ನಿಂದ ಪ್ರತ್ಯೇಕವಾದಾಗಿನಿಂದಲೂ ನನ್ನ ಬಾಳಿನಲ್ಲಿ ನಿನ್ನ ಮಹತ್ವ ಅರಿತಿದ್ದೆನೆ. ನಿನ್ನ ಸಂಗವಿಲ್ಲದೇ ನನಗೆ ಬದುಕಲು ಅಸಾಧಶ್ಯವೇನೋ? ಎಂದೆನ್ನಿಸಿದಾಗಿನಿಂದಲೂ ನಿನ್ನನ್ನು ಅತಿಯಾಗಿ ಪ್ರೀತಿಸಿದೆ. ನೀನು ಬೆಳೆಸಿದ ಸ್ನೇಹದ ಮೊಗ್ಗೀಗ ನನ್ನೆದೆಯಲ್ಲಿ ಹೂವಾಗಿ ಅರಳಿಬಿಟ್ಟಿದೆ.ಎಲ್ಲವೂ ನಿನ್ನ ತೀರ್ಮಾನದ ಮೇಲೆ ನಿರ್ಭರವಾಗಿದೆ. ಆ ನಿರ್ಧಾರ love is a sweet pioson ಎಂಬ ಭಗ್ನ ಪ್ರೇಮಿಗಳ ಮಾತನ್ನು ಮೀರುವಂತಿರಲಿ. ನಿನ್ನ ಯಾವ ನಿರ್ಧಾರಕ್ಕೂ ನಾನು ಬದ್ಧ.
ಇಂತಿ ನಿನ್ನ ಪ್ರೀತಿಯ
ರವೀಂದ್ರ
ಈ ಪತ್ರ ೋದಿ ಮುಗಿಸುವಷ್ಟರಲ್ಲಿ ರವೀಂದ್ರ ಬಂದ. ಅವಳ ಕಣ್ಣುಗಳಲ್ಲಿನ ಕಂಬನಿಯನ್ನು ಕಂಡು ದಿಙ್ಮೂಢನಾದ.ಅವಳು ಓಡಿ ಬಂದು ಇವನನ್ನು ಬಿಗಿದಪ್ಪಿದಾಗ ಅವನಿಗಾಶ್ಚರ್ಯವೋ ಆಶ್ಚರ್ಯ..
ಅವಳು ನಂತರ ಎಲ್ಲವನ್ನು ಬಿಡಿಸಿ ಹೇಳಿದಳು. ಬಂದವರು ನನ್ನ ದೂರದ ಹಿತೈಷಿಗಳು. ನಾನು ಸ್ವದೇಶಕ್ಕೆ ಮರಳಿದುದ್ದಕ್ಕೆ ನನಗೆ ಅಭಿನಂದಿಸಲು ಬಂದಿದ್ದರೆಂದು ಹೇಳಿ ರವೀಂದ್ರನ ಪ್ರಿತಿಯನ್ನು ಒಪ್ಪಿಕೊಂಡಳು.
"ಕುಣಿದಳಾ ಶಾಂತಲೆ
ಅವನ ಮನದ ಬನದೊಳಗೆ ನವಿಲಾಗಿ,
ಗರಿ ಬಿಚ್ಚಿ ನವಿಲಂತೆ
ಹರುಷ ಉಕ್ಕಿದ ಮನಸು ಬಿಚ್ಚಿ..."




---ಬಸವಣ್ಣೆಪ್ಪ ಎಸ್.ಗುಂಜಾಳ
ಸಹ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಅಂಬೇವಾಡಿ,
ತಾ-ಆಳಂದ, ಜಿ- ಗುಲಬರ್ಗಾ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....