ಸುಟ್ಟರೂ ಬೆಲೆ ಕಟ್ಟಲಾಗದ ನಗು

ಸುಡುವ ಬೆಂಕಿಯ ನಗು-ಗೆಳೆಯ ಸುರೇಶ್
ಎಲ್.ರಾಜಮಾನೆ ಅವರ ಚೊಚ್ಚಲ ಕವನ
ಸಂಕಲನ. ರನ್ನನೂರಾದ ಮುಧೋಳ
ತಾಲೂಕಿನ ರನ್ನ ಬೆಳಗಲಿಯ ಈ ಕವಿ
ಕಾವ್ಯ ಪ್ರೌಢಿಮೆಯಲಿ ಗಂಡುಗಲಿ.
ಪ್ರಸ್ತುತ ಕವನ ಸಂಕಲನದಲಿ ಅವರ
ಕವಿತೆಗಳು ಸಮಾಜ ಮುಖಿಯಾಗಿ ಜೀವ
ಪಡೆದುಕೊಳ್ಳುತ್ತವೆ. ಪ್ರತಿ ಕವಿತೆಯ
ಸಾಲುಗಳು ನೆನ್ನೆ ಮೊನ್ನೆ ನಂಮ
ಬದುಕಿನಲಿ ಘಟಿಸಿ ಹೋದಂತೆ
ತೋರುತ್ತವೆ. ಇವರ ಕವಿತೆಗಳು
ಜ್ವಲಂತ ಸಮಾಜವನ್ನು
ತೆರೆದಿಡುತ್ತವೆ.
ಬಡತನ,ಭಗ್ನಪ್ರೇಮ,ರಾಷ್ಟ್ರಪ್ರೇಮ,
ಪರಿಸರ ಕಾಳಜಿ ಹಾಗೂ ಮಾನವೀಯ ನೆಲೆಗಳು ಆಳವಾಗಿ ಬೇರೂರಿ ಕವಿತೆಗಳು
ಹೃದಯಸ್ಪರ್ಶೀಯವೆನಿಸುತ್ತವೆ. ಕವಿಯ ತುಮುಲಗಳು, ಪರಿಹಾರಗಳು,ಸದ್ಯದ ಅನಿವಾರ್ಯತೆಗಳು
ಕವಿತೆಯ ಮತ್ತೊಂದು ಮಗ್ಗಲನಲ್ಲಿವೆ. ಸುಡುವ ಬೆಂಕಿಯ ನಗುವಿನ ಜತೆ ಅಂತಸ್ಥ ಅಳು
ಅನಾವರಣಗೊಳ್ಳುತ್ತದೆ. ಕವಿತೆಗಳು ದೀರ್ಘವೆನಿಸಿದರು ಸರಳವಾಗಿ ಓದಿಸಿಕೊಂಡು ಹೋಗುತ್ತ
ಆಪ್ತವಾಗುತ್ತವೆ.
ಬೆಂಕಿ ಸುಟ್ಟರೂ ಅದರ ನಗು ಇಷ್ಟವಾಗುತ್ತದೆ.
-- ರನ್ನ ಕಂದ

Comments

ತುಂಬು ಹೃದಯದ ಧನ್ಯವಾದಗಳು ಸರ್ ತಮ್ಮ ಪುಸ್ತಕ ಪ್ರೀತಿಗೆ ಮತ್ತು ಅದರೊಳಗಿನ ಅಳುವಿನ ಆಳಕ್ಕಿಳಿದು ನಿಮ್ಮ ಮುಕ್ತ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ. ನಿಮ್ಮ ಪ್ರೀತಿ ನಿರಂತರವಾಗಿ ನನ್ನೊಂದಿಗಿರಲಿ.

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...