ಒಂದು ಸುನೀತ..

ನನ್ನ ನೆನಪು ಅವಳಲ್ಲಿ ಶವವಾಗಿ ಕೊಳೆಯುತ್ತಿದೆ
ಅವಳ ಪ್ರತಿ ನೆನಪು ನನ್ನಲ್ಲಿ ಸಸಿಯಾಗಿ ಮೊಳೆಯುತಿದೆ


ತೈಲವಿಲ್ಲದ ದೀಪ ಉರಿಯುವುದಾದರೂ ಹೇಗೆ?
ಅವಳಿಲ್ಲದ ನನ್ನ ನಾನು ಅರಿಯುವುದಾದರೂ ಹೇಗೆ?
ಪುಟ್ಟ ಪೋರಿ ಕಟ್ಟಿಕೊಂಡ ಕಾಲ್ಚೈನು ಕುಣಿವಾಗ ಬಿಚ್ಚಿಕೊಂಡಂತೆ
ನನ್ನನ್ನವಳು ಕಳಚಿಕೊಂಡಳೇ ತನಗರಿವಿಲ್ಲದಂತೆ?


ಅರವತ್ತು ವೋಲ್ಟಿನ ಬಲ್ಬಿನ ಮುಂದೆ ಹಿಡಿ ಬುಡ್ಡಿ ದೀಪ
ಸಾಲದಾಯಿತೇ ಯಾರದೋ ಉಳ್ಳವನ ಮುಂದೆ ನನ್ನ ಈ ರೂಪ?
ಒಲ್ಲದ ಗಂಡಸರ ತಣಿಸೋ ಸೂಳೆಯರ ಸುಳ್ಳು ಸುಖ
ಅಂತೆಯೇ ಅನ್ನಿಸಿರಬೇಕು ಅವಳಗೆ ನನ್ನೊಂದಿಗಿನ ದುಃಖ


ಅವಳ ಮನ ಮುಗಿಲು ಮಸುಕಾದ ಮುಸ್ಸಂಜೆ ಚಿತ್ರ
ನನ್ನ ನೆನಪಿನ ಶವದ ಮೈಯಿಂದ ಒಸರುವುದು ಕೀವು ಮಾತ್ರ
ಅವಳ ಉತ್ಸಾಹದ ನಾಲಗೆ ಹೊಸದೇನನ್ನೋ ನೆಕ್ಕುತಿದೆ
ನನ್ನ ಮನಸ್ಸು ಅವಳಿಲ್ಲದೇ ಹಗಲಿರುಳು ಬಿಕ್ಕುತಿದೆ..

             ---ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....